Learn Languages Online!
|
![]() ![]() ![]() |
Home > 50languages.com > ಕನ್ನಡ > ಯೆಹೂದಿ ಭಾಷೆ > Table of contents |
೮೪ [ಎಂಬತ್ತ ನಾಲ್ಕು] |
ಭೂತಕಾಲ ೪
|
![]() |
84 [שמונים וארבע] |
||
עבר 4
|
| |||||
ಓದುವುದು
| |||||
ನಾನು ಓದಿದ್ದೇನೆ.
| |||||
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ.
| |||||
ಅರ್ಥ ಮಾಡಿಕೊಳ್ಳುವುದು.
| |||||
ನಾನು ಅರ್ಥ ಮಾಡಿಕೊಂಡಿದ್ದೇನೆ.
| |||||
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ.
| |||||
ಉತ್ತರ ಕೊಡುವುದು
| |||||
ನಾನು ಉತ್ತರ ಕೊಟ್ಟಿದ್ದೇನೆ.
| |||||
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ.
| |||||
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು.
| |||||
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ.
| |||||
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ.
| |||||
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ.
| |||||
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ.
| |||||
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ.
| |||||
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ.
| |||||
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ.
| |||||
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು.
| |||||
![]() ![]() ![]() |
ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು |
Downloads are FREE for private use, public schools and for non-commercial purposes only! LICENCE AGREEMENT. Please report any mistakes or incorrect translations here. Imprint - Impressum © Copyright 2007 - 2020 Goethe Verlag Starnberg and licensors. All rights reserved. Contact book2 ಕನ್ನಡ - ಯೆಹೂದಿ ಭಾಷೆ for beginners
|