Learn Languages Online!

Home  >   50languages.com   >   ಕನ್ನಡ   >   ಪರ್ಷಿಯನ್ ಭಾಷೆ   >   Table of contents


೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

 


‫94 [نود و چهار]‬

‫حروف ربط 1‬

 

 
ಮಳೆ ನಿಲ್ಲುವವರೆಗೆ ಕಾಯಿ.
‫صبر کن تا باران بند بیاد.‬
sabr kon tâ bârân motevaghef shavad.
ನಾನು ತಯಾರಾಗುವವರೆಗೆ ಕಾಯಿ.
‫صبر کن تا من کارم تمام شود.‬
sabr kon tâ man kâram tamâm shavad.
ಅವನು ಹಿಂತಿರುಗಿ ಬರುವವರೆಗೆ ಕಾಯಿ.
‫صبر کن تا او برگردد.‬
sabr kon tâ oo bar-gar-dad
 
 
 
 
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ.
‫من صبر می‌کنم تا موهایم خشک شوند.‬
man sabr mikonam tâ muhâyam khoshk shavand.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ.
‫من صبر می‌کنم تا فیلم تمام شود.‬
man sabr mikonam tâ film tamâm shavad.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ.
‫من صبر می‌کنم تا چراغ راهنما سبز شود.‬
man sabr mikonam tâ cherâghe râh namâ sabz shavad.
 
 
 
 
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ?
‫تو کی به مسافرت می‌روی؟‬
to key be mosâferat miravi?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ?
‫قبل از تعطیلات تابستان؟‬
pish az ta-atilâte tâbestâni?
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ.
‫بله، قبل از اینکه تعطیلات تابستان شروع شود.‬
bale, pish az ânke ta-atilâte tâbestâni shoru-e shavad.
 
 
 
 
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು.
‫قبل از اینکه زمستان شروع شود، سقف را تعمیر کن.‬
pish az ânke zemestân shoru-e shavad, saghf râ ta-a-mir kon.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ.
‫قبل از اینکه سر میز بنشینی، دست هایت را بشوی.‬
pish az ânke sare miz beneshini, dast-hâyat râ beshuye.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು.
‫قبل از اینکه خارج شوی، پنجره را ببند.‬
pish az ânke khârej shavi, panjere râ beband.
 
 
 
 
ಮನೆಗೆ ಯಾವಾಗ ಹಿಂದಿರುಗುತ್ತೀಯ?
‫کی به خانه می‌آیی؟‬
key be khâne mi-âyee?
ಪಾಠಗಳ ನಂತರವೇ?
‫بعد از کلاس؟‬
bad az kelâse dars?
ಹೌದು, ಪಾಠಗಳು ಮುಗಿದ ನಂತರ.
‫بله، بعد از اینکه کلاس تمام شد.‬
bale, bad az in ke kelâse dars tamâm shod.
 
 
 
 
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ.
‫بعد از اینکه او (مرد) تصادف کرد دیگر نتوانست کار کند.‬
bad az in ke oo tasâdof kard digar natavânest kâr konad.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ.
‫بعد از اینکه او (مرد) کارش را از دست داد به آمریکا رفت.‬
bad az in ke oo kârash râ az dast dâd be âmrikâ raft.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ.
‫بعد از اینکه او (مرد) به آمریکا رفت ثروتمند شد.‬
bad az in ke oo be âmrikâ raft servatmand shod.
 
 
 
 


ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 ಕನ್ನಡ - ಪರ್ಷಿಯನ್ ಭಾಷೆ for beginners