Learn Languages Online!

Home  >   50languages.com   >   ಕನ್ನಡ   >   ಪರ್ಷಿಯನ್ ಭಾಷೆ   >   Table of contents


೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

 


‫79 [هفتاد و نه]‬

‫صفت ها 2‬

 

 
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ.
‫من لباس آبی به تن دارم.‬
man yek lebâse âbi be tan dâram.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ.
‫من لباس قرمز به تن دارم.‬
man yek lebâse ghermez be tan dâram.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ.
‫من لباس سبز به تن دارم.‬
man yek lebâse sabz be tan dâram.
 
 
 
 
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ.
‫من یک کیف سیاه می‌خرم.‬
man yek kife siâh mi-kharam.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ.
‫من یک کیف قهوه ای می‌خرم.‬
man yek kife ghahve-i mi-kharam.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ.
‫من یک کیف سفید می‌خرم.‬
man yek kife sefid mi-kharam.
 
 
 
 
ನನಗೆ ಒಂದು ಹೊಸ ಗಾಡಿ ಬೇಕು.
‫من یک خودروی جدید لازم دارم.‬
man yek khodroye jadid lâzem dâram.
ನನಗೆ ಒಂದು ವೇಗವಾದ ಗಾಡಿ ಬೇಕು.
‫من یک خودروی پرسرعت لازم دارم.‬
man yek khodroye sari lâzem dâram.
ನನಗೆ ಒಂದು ಹಿತಕರವಾದ ಗಾಡಿ ಬೇಕು.
‫من یک خودروی راحت لازم دارم.‬
man yek khodroye râhat lâzem dâram.
 
 
 
 
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ.
‫آن بالا یک خانم پیر زندگی می‌کند.‬
ân bâlâ yek khânome pir zendegi mikonad.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ.
‫آن بالا یک خانم چاق زندگی می‌کند.‬
ân bâlâ yek khânome châgh zendegi mikonad.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ.
‫آن پائین یک خانم فضول زندگی می‌کند.‬
ân pâ-in yek khânome konjkâv zendegi mikonad.
 
 
 
 
ನಮ್ಮ ಅತಿಥಿಗಳು ಒಳ್ಳೆಯ ಜನ.
‫مهمان های ما آدم های مهربانی (خوبی) بودند.‬
mihmânân-emân âdam hâye merabâni budand.
ನಮ್ಮ ಅತಿಥಿಗಳು ವಿನೀತ ಜನ.
‫مهمان های ما آدم های مودبی بودند.‬
mihmânân-emân âdam hâye moadabi budand.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ.
‫مهمان های ما آدم های جالبی بودند.‬
mihmânân-emân âdam hâye jâlebi budand.
 
 
 
 
ನನಗೆ ಮುದ್ದು ಮಕ್ಕಳಿದ್ದಾರೆ.
‫من بچه‌های نازنینی دارم.‬
man bache hâye nâzanini dâram.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು.
‫اما همسایه‌ها بچه‌های بی ادبی دارند.‬
ammâ hamsâye hâ bache hâye bi adabi dârand.
ನಿಮ್ಮ ಮಕ್ಕಳು ಒಳ್ಳೆಯವರೆ?
‫بچه‌های شما با ادب هستند؟‬
bache hâye shomâ bâ adab hastand?
 
 
 
 


ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 ಕನ್ನಡ - ಪರ್ಷಿಯನ್ ಭಾಷೆ for beginners