Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

 


74 [ਚੁਹੱਤਰ]

ਬੇਨਤੀ ਕਰਨਾ

 

 
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ?
ਕੀ ਤੁਸੀਂ ਮੇਰੇ ਵਾਲ ਕੱਟ ਸਕਦੇ ਹੋ?
kī tusīṁ mērē vāla kaṭa sakadē hō?
ಆದರೆ ತುಂಬ ಚಿಕ್ಕದಾಗಿ ಬೇಡ.
ਬਹੁਤ ਛੋਟੇ ਨਾ ਕਰਨਾ।
Bahuta chōṭē nā karanā.
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ.
ਥੋੜ੍ਹੇ ਹੋਰ ਛੋਟੇ ਕਰ ਦਿਓ।
Thōṛhē hōra chōṭē kara di'ō.
 
 
 
 
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ?
ਕੀ ਤੁਸੀਂ ਤਸਵੀਰ ਖਿੱਚ ਸਕਦੇ ਹੋ?
Kī tusīṁ tasavīra khica sakadē hō?
ಚಿತ್ರಗಳು ಸಿ ಡಿಯಲ್ಲಿ ಇವೆ.
ਤਸਵੀਰਾਂ ਸੀਡੀ ਵਿੱਚ ਹਨ।
Tasavīrāṁ sīḍī vica hana.
ಚಿತ್ರಗಳು ಕ್ಯಾಮರದಲ್ಲಿ ಇವೆ.
ਤਸਵੀਰਾਂ ਕੈਮਰੇ ਵਿੱਚ ਹਨ।
Tasavīrāṁ kaimarē vica hana.
 
 
 
 
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ?
ਕੀ ਤੁਸੀਂ ਘੜੀ ਠੀਕ ਕਰ ਸਕਦੇ ਹੋ?
Kī tusīṁ ghaṛī ṭhīka kara sakadē hō?
ಗಾಜು ಒಡೆದು ಹೋಗಿದೆ.
ਕੱਚ ਟੁੱਟ ਗਿਆ ਹੈ।
Kaca ṭuṭa gi'ā hai.
ಬ್ಯಾಟರಿ ಖಾಲಿಯಾಗಿದೆ.
ਬੈਟਰੀ ਖਾਲੀ ਹੈ।
Baiṭarī khālī hai.
 
 
 
 
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ?
ਕੀ ਤੁਸੀਂ ਕਮੀਜ਼ ਨੂੰ ਪ੍ਰੈੱਸ ਕਰ ਸਕਦੇ ਹੋ?
Kī tusīṁ kamīza nū praisa kara sakadē hō?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ?
ਕੀ ਤੁਸੀਂ ਪਤਲੂਨ ਸਾਫ ਕਰ ਸਕਦੇ ਹੋ?
Kī tusīṁ patalūna sāpha kara sakadē hō?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ?
ਕੀ ਤੁਸੀਂ ਜੁੱਤੀ ਠੀਕ ਕਰ ਸਕਦੇ ਹੋ?
Kī tusīṁ jutī ṭhīka kara sakadē hō?
 
 
 
 
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ?
ਕੀ ਤੁਸੀਂ ਮੈਨੂੰ ਸੁਲਗਾਉਣ ਲਈ ਕੁਝ ਦੇ ਸਕਦੇ ਹੋ?
Kī tusīṁ mainū sulagā'uṇa la'ī kujha dē sakadē hō?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ?
ਕੀ ਤੁਹਾਡੇ ਕੋਲ ਮਾਚਿਸ ਜਾਂ ਲਾਈਟਰ ਹੈ?
Kī tuhāḍē kōla mācisa jāṁ lā'īṭara hai?
ನಿಮ್ಮ ಬಳಿ ಆಷ್ ಟ್ರೇ ಇದೆಯೆ?
ਕੀ ਤੁਹਾਡੇ ਕੋਲ ਰਾਖਦਾਨੀ ਹੈ?
Kī tuhāḍē kōla rākhadānī hai?
 
 
 
 
ನೀವು ಚುಟ್ಟಾ ಸೇದುತ್ತೀರಾ?
ਕੀ ਤੁਸੀਂ ਸਿਗਰਟ ਪੀਂਦੇ ਹੋ?
Kī tusīṁ sigaraṭa pīndē hō?
ನೀವು ಸಿಗರೇಟ್ ಸೇದುತ್ತೀರಾ?
ਕੀ ਤੁਸੀਂ ਸਿਗਰਟ ਪੀਂਦੇ ਹੋ?
Kī tusīṁ sigaraṭa pīndē hō?
ನೀವು ಪೈಪ್ ಸೇದುತ್ತೀರಾ?
ਕੀ ਤੁਸੀਂ ਪਾਈਪ ਪੀਂਦੇ ਹੋ?
Kī tusīṁ pā'īpa pīndē hō?
 
 
 
 


ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners