Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

 


87 [ਸਤਾਸੀ]

ਭੂਤਕਾਲਵਾਚਕ ਸਹਾਇਕ ਕਿਰਿਆਂਵਾਂ 1

 

 
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು.
ਸਾਨੂੰ ਪੌਦਿਆਂ ਨੂੰ ਪਾਣੀ ਦੇਣਾ ਪਿਆ।
sānū paudi'āṁ nū pāṇī dēṇā pi'ā.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು.
ਸਾਨੂੰ ਘਰ ਠੀਕ ਕਰਨਾ ਪਿਆ।
Sānū ghara ṭhīka karanā pi'ā.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು.
ਸਾਨੂੰ ਬਰਤਨ ਧੋਣੇ ਪਏ।
Sānū baratana dhōṇē pa'ē.
 
 
 
 
ನೀವು ಬಿಲ್ ಪಾವತಿಸಬೇಕಾಗಿತ್ತೆ?
ਕੀ ਤੈਨੂੰ ਬਿਲ ਦੇਣਾ ਪਿਆ?
Kī tainū bila dēṇā pi'ā?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ?
ਕੀ ਤੈਨੂੰ ਪ੍ਰਵੇਸ਼ – ਸ਼ੁਲਕ ਦੇਣਾ ਪਿਆ?
Kī tainū pravēśa – śulaka dēṇā pi'ā?
ನೀವು ದಂಡವನ್ನು ತೆರಬೇಕಾಗಿತ್ತೆ?
ਕੀ ਤੈਨੂੰ ਜੁਰਮਾਨਾ ਦੇਣਾ ਪਿਆ?
Kī tainū juramānā dēṇā pi'ā?
 
 
 
 
ಯಾರು ವಿದಾಯ ಹೇಳಬೇಕಾಗಿತ್ತು?
ਕੌਣ ਜਾਣਾ ਚਾਹੁੰਦਾ ਹੈ?
Kauṇa jāṇā cāhudā hai?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು?
ਕਿਸਨੇ ਘਰ ਜਲਦੀ ਜਾਣਾ ਹੈ?
Kisanē ghara jaladī jāṇā hai?
ಯಾರು ರೈಲಿಗೆ ಹೋಗಬೇಕಾಗಿತ್ತು?
ਕਿਸਨੇ ਟ੍ਰੇਨ ਫੜਨੀ ਹੈ?
Kisanē ṭrēna phaṛanī hai?
 
 
 
 
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ.
ਅਸੀਂ ਹੋਰ ਨਹੀਂ ਰਹਿਣਾ ਚਾਹੁੰਦੇ ਸੀ।
Asīṁ hōra nahīṁ rahiṇā cāhudē sī.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ.
ਅਸੀਂ ਕੁਝ ਪੀਣਾ ਨਹੀਂ ਚਾਹੁੰਦੇ ਸੀ।
Asīṁ kujha pīṇā nahīṁ cāhudē sī.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ.
ਅਸੀਂ ਪ੍ਰੇਸ਼ਾਨ ਨਹੀਂ ਕਰਨਾ ਚਾਹੁੰਦੇ ਸੀ।
Asīṁ prēśāna nahīṁ karanā cāhudē sī.
 
 
 
 
ನಾನು ಫೋನ್ ಮಾಡಲು ಬಯಸಿದ್ದೆ.
ਮੈਂ ਫੋਨ ਕਰਨ ਹੀ ਵਾਲਾ ਸੀ / ਵਾਲੀ ਸੀ।
Maiṁ phōna karana hī vālā sī/ vālī sī.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ .
ਮੈਂ ਟਕਸੀ ਮੰਗਵਾਉਣਾ ਚਾਹੁੰਦਾ ਸੀ / ਚਾਹੁੰਦੀ ਸੀ।
Maiṁ ṭakasī magavā'uṇā cāhudā sī/ cāhudī sī.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ.
ਅਸਲ ਵਿੱਚ ਮੈਨ ਘਰ ਜਾਣਾ ਚਾਹੁੰਦਾ ਸੀ / ਚਾਹੁੰਦੀ ਸੀ।
Asala vica maina ghara jāṇā cāhudā sī/ cāhudī sī.
 
 
 
 
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ.
ਮੈਨੂੰ ਲੱਗਿਆ ਕਿ ਤੁਸੀ ਆਪਣੇ ਪਤੀ ਨੂੰ ਫੋਨ ਕਰਨਾ ਚਾਹੁੰਦੇ ਸੀ।
Mainū lagi'ā ki tusī āpaṇē patī nū phōna karanā cāhudē sī.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ.
ਮੈਨੂੰ ਲੱਗਿਆ ਕਿ ਤੁਸੀਂ ਸੂਚਨਾ ਸੇਵਾ ਨੂੰ ਫੋਨ ਕਰਨਾ ਚਾਹੁੰਦੇ ਸੀ।
Mainū lagi'ā ki tusīṁ sūcanā sēvā nū phōna karanā cāhudē sī.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ.
ਮੈਨੂੰ ਲੱਗਿਆ ਕਿ ਤੁਸੀਂ ਪੀਜ਼ਾ ਮੰਗਵਾਉਣਾ ਚਾਹੁੰਦੇ ਸੀ।
Mainū lagi'ā ki tusīṁ pīzā magavā'uṇā cāhudē sī.
 
 
 
 


ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners