Learn Languages Online!

Home  >   50languages.com   >   ಕನ್ನಡ   >   ತಮಿಳು   >   Table of contents


೫೦ [ಐವತ್ತು]

ಈಜು ಕೊಳದಲ್ಲಿ

 


50 [ஐம்பது]

நீச்சல்குளத்தில்

 

 
ಇವತ್ತು ತುಂಬ ಸೆಖೆ ಇದೆ.
இன்று மிகவும் வெப்பமாக இருக்கிறது.
iṉṟu mikavum veppamāka irukkiṟatu.
ನಾವು ಈಜು ಕೊಳಕ್ಕೆ ಹೋಗೋಣವೆ?
நாம் நீச்சல் குளத்திற்கு செல்லலாமா?
Nām nīccal kuḷattiṟku cellalāmā?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ?
உனக்கு நீந்த வேண்டும் போல் இருக்கிறதா?
Uṉakku nīnta vēṇṭum pōl irukkiṟatā?
 
 
 
 
ನಿನ್ನ ಬಳಿ ಟವೆಲ್ ಇದೆಯೆ?
உன்னிடம் துண்டு இருக்கிறதா?
Uṉṉiṭam tuṇṭu irukkiṟatā?
ನಿನ್ನ ಬಳಿ ಈಜು ಚಡ್ಡಿ ಇದೆಯೆ?
உன்னிடம் நீச்சல் அரைக்கால் சட்டை இருக்கிறதா?
Uṉṉiṭam nīccal araikkāl caṭṭai irukkiṟatā?
ನಿನ್ನ ಬಳಿ ಸ್ನಾನದ ಸೂಟು ಇದೆಯೆ?
உன்னிடம் நீச்சல் உடை இருக்கிறதா?
Uṉṉiṭam nīccal uṭai irukkiṟatā?
 
 
 
 
ನಿನಗೆ ಈಜಲು ಬರುತ್ತದೆಯೆ?
உனக்கு நீந்தத் தெரியுமா?
Uṉakku nīntat teriyumā?
ನಿನಗೆ ಧುಮುಕಲು ಆಗುತ್ತದೆಯೆ?
உனக்கு தலைகீழ்பாய்ச்சல் தெரியுமா?
Uṉakku talaikīḻpāyccal teriyumā?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ?
உனக்கு நீரில் குதிக்கத் தெரியுமா?
Uṉakku nīril kutikkat teriyumā?
 
 
 
 
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ?
குளியல் அறை எங்கு இருக்கிறது?
Kuḷiyal aṟai eṅku irukkiṟatu?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ?
உடைமாற்றும் அறை எங்கு இருக்கிறது?
Uṭaimāṟṟum aṟai eṅku irukkiṟatu?
ಇಲ್ಲಿ ಈಜುಕನ್ನಡಕ ಎಲ್ಲಿದೆ?
நீச்சல் கண்ணாடி எங்கு இருக்கிறது?
Nīccal kaṇṇāṭi eṅku irukkiṟatu?
 
 
 
 
ನೀರು ಆಳವಾಗಿದೆಯೆ?
நீர் மிகவும் ஆழமா?
Nīr mikavum āḻamā?
ನೀರು ಸ್ವಚ್ಚವಾಗಿದೆಯೆ?
நீர் சுத்தமாக இருக்கிறதா?
Nīr cuttamāka irukkiṟatā?
ನೀರು ಬೆಚ್ಚಗಿದೆಯೆ?
நீர் இதமான வெப்பமாக இருக்கிறதா?
Nīr itamāṉa veppamāka irukkiṟatā?
 
 
 
 
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ.
நான் உறைந்து கொண்டு இருக்கிறேன்.
Nāṉ uṟaintu koṇṭu irukkiṟēṉ.
ನೀರು ಕೊರೆಯುತ್ತಿದೆ.
நீர் மிகவும் குளிராக இருக்கிறது.
Nīr mikavum kuḷirāka irukkiṟatu.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ.
நான் நீரிலிருந்து வெளியேறப்போகிறேன்.
Nāṉ nīriliruntu veḷiyēṟappōkiṟēṉ.
 
 
 
 


ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ತಮಿಳು for beginners