೮೮ [ಎಂಬತ್ತೆಂಟು] |
ಸಹಾಯಕ ಕ್ರಿಯಾಪದಗಳ ಭೂತಕಾಲ ೨
|
![]() |
88 [åttiåtte] |
||
Fortid av modale hjelpeverb 2
|
| |||||
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ.
| |||||
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ.
| |||||
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ.
| |||||
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ.
| |||||
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ.
| |||||
ಅವರು ಮಲಗಲು ಇಷ್ಟಪಡಲಿಲ್ಲ.
| |||||
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು.
| |||||
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು.
| |||||
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು.
| |||||
ನಾನು ಏನನ್ನಾದರು ಆಶಿಸಬಹುದಾಗಿತ್ತು.
| |||||
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು.
| |||||
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು.
| |||||
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ?
| |||||
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ?
| |||||
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ?
| |||||
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು.
| |||||
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು.
| |||||
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು.
| |||||
ಮರೆಯುವುದರ ವಿರುದ್ಧ ಸಲಹೆಗಳು.ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು. |
Downloads are FREE for private use, public schools and for non-commercial purposes only! LICENCE AGREEMENT. Please report any mistakes or incorrect translations here. Imprint - Impressum © Copyright 2007 - 2020 Goethe Verlag Starnberg and licensors. All rights reserved. Contact book2 ಕನ್ನಡ - ನಾರ್ವೇಜಿಯನ್ - Nynorsk for beginners
|