Learn Languages Online!

Home  >   50languages.com   >   ಕನ್ನಡ   >   ನಾರ್ವೇಜಿಯನ್ - Nynorsk   >   Table of contents


೫ [ಐದು]

ದೇಶಗಳು ಮತ್ತು ಭಾಷೆಗಳು

 


5 [fem]

Land og språk

 

 

 Click to see the text! arrow
  
ಜಾನ್ ಲಂಡನ್ನಿಂದ ಬಂದಿದ್ದಾನೆ.
ಲಂಡನ್ ಇಂಗ್ಲೆಂಡಿನಲ್ಲಿದೆ.
ಅವನು ಇಂಗ್ಲಿಷ್ ಮಾತನಾಡುತ್ತಾನೆ.
 
 
 
 
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ
ಅವಳು ಸ್ಪಾನಿಷ್ ಮಾತನಾಡುತ್ತಾಳೆ.
 
 
 
 
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ.
ಬರ್ಲೀನ್ ಜರ್ಮನಿಯಲ್ಲಿದೆ.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ?
 
 
 
 
ಲಂಡನ್ ಒಂದು ರಾಜಧಾನಿ.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು.
 
 
 
 
ಫ್ರಾನ್ಸ್ ಯುರೋಪ್ ನಲ್ಲಿದೆ.
ಈಜಿಪ್ಟ್ ಆಫ್ರಿಕಾದಲ್ಲಿದೆ.
ಜಪಾನ್ ಏಷಿಯಾದಲ್ಲಿದೆ.
 
 
 
 
ಕೆನಡಾ ಉತ್ತರ ಅಮೆರಿಕಾದಲ್ಲಿದೆ.
ಪನಾಮ ಮಧ್ಯ ಅಮೆರಿಕಾದಲ್ಲಿದೆ.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ.
 
 
 
 


ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ನಾರ್ವೇಜಿಯನ್ - Nynorsk for beginners