Learn Languages Online!

Home  >   50languages.com   >   ಕನ್ನಡ   >   ಸ್ಪ್ಯಾನಿಷ್   >   Table of contents


೪೨ [ನಲವತ್ತೆರಡು]

ನಗರದರ್ಶನ

 


42 [cuarenta y dos]

Una visita por la ciudad

 

 

 Click to see the text! arrow
  
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ?
 
 
 
 
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ?
 
 
 
 
ಇಲ್ಲಿ ಛಾಯಚಿತ್ರ ತೆಗೆಯಬಹುದೆ?
ಪ್ರವೇಶಶುಲ್ಕ ಕೊಡಬೇಕೆ?
ಪ್ರವೇಶಶುಲ್ಕ ಎಷ್ಟು?
 
 
 
 
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ?
 
 
 
 
ಇದು ಯಾವ ಕಟ್ಟಡ?
ಇದು ಎಷ್ಟು ಹಳೆಯ ಕಟ್ಟಡ?
ಈ ಕಟ್ಟಡವನ್ನು ಕಟ್ಟಿದವರು ಯಾರು?
 
 
 
 
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ.
ನನಗೆ ಕಲೆಯಲ್ಲಿ ಆಸಕ್ತಿ ಇದೆ.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ.
 
 
 
 


ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಸ್ಪ್ಯಾನಿಷ್ for beginners