Learn Languages Online!

Home  >   50languages.com   >   ಕನ್ನಡ   >   ಸ್ಪ್ಯಾನಿಷ್   >   Table of contents


೪೧ [ನಲವತ್ತೊಂದು]

ಎಲ್ಲಿದೆ...?

 


41 [cuarenta y uno]

Orientación

 

 

 Click to see the text! arrow
  
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ?
ನನಗೆ ನಗರದ ನಕ್ಷೆ ಕೊಡುವಿರಾ?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ?
 
 
 
 
ನಗರದ ಹಳೆಯ ಭಾಗ ಎಲ್ಲಿದೆ?
ಇಲ್ಲಿ ಚರ್ಚ್ ಎಲ್ಲಿದೆ?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ?
 
 
 
 
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
 
 
 
 
ಇಲ್ಲಿ ಬಂದರು ಎಲ್ಲಿದೆ?
ಇಲ್ಲಿ ಮಾರುಕಟ್ಟೆ ಎಲ್ಲಿದೆ?
ಇಲ್ಲಿ ಕೋಟೆ ಎಲ್ಲಿದೆ?
 
 
 
 
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ?
 
 
 
 
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು.
 
 
 
 


ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಸ್ಪ್ಯಾನಿಷ್ for beginners