Learn Languages Online!

Home  >   50languages.com   >   ಕನ್ನಡ   >   ಜೆಕ್   >   Table of contents


೮೩ [ಎಂಬತ್ತಮೂರು]

ಭೂತಕಾಲ – ೩

 


83 [osmdesát tři]

Minulý čas 3

 

 

 Click to see the text! arrow
  
ಟೆಲಿಫೋನ್ ಮಾಡುವುದು.
ನಾನು ಫೋನ್ ಮಾಡಿದೆ.
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ.
 
 
 
 
ಪ್ರಶ್ನಿಸುವುದು.
ನಾನು ಪ್ರಶ್ನೆ ಕೇಳಿದೆ.
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ.
 
 
 
 
ಹೇಳುವುದು
ನಾನು ಹೇಳಿದೆ.
ನಾನು ಸಂಪೂರ್ಣ ಕಥೆ ಹೇಳಿದೆ.
 
 
 
 
ಕಲಿಯುವುದು
ನಾನು ಕಲಿತೆ.
ನಾನು ಇಡೀ ಸಾಯಂಕಾಲ ಕಲಿತೆ.
 
 
 
 
ಕೆಲಸ ಮಾಡುವುದು.
ನಾನು ಕೆಲಸ ಮಾಡಿದೆ.
ನಾನು ಇಡೀ ದಿವಸ ಕೆಲಸ ಮಾಡಿದೆ.
 
 
 
 
ತಿನ್ನುವುದು.
ನಾನು ತಿಂದೆ.
ನಾನು ಊಟವನ್ನು ಪೂರ್ತಿಯಾಗಿ ತಿಂದೆ.
 
 
 
 


ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಜೆಕ್ for beginners