Learn Languages Online!

Home  >   50languages.com   >   ಕನ್ನಡ   >   ಜೆಕ್   >   Table of contents


೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

 


48 [čtyřicet osm]

Aktivity na dovolené

 

 

 Click to see the text! arrow
  
ಸಮುದ್ರತೀರ ಶುಭ್ರವಾಗಿದೆಯೆ?
ಅಲ್ಲಿ ಈಜಬಹುದೆ?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ?
 
 
 
 
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ?
 
 
 
 
ನನಗೆ ಸರ್ಫ್ ಮಾಡುವ ಆಸೆ ಇದೆ.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ.
 
 
 
 
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ?
 
 
 
 
ನಾನು ಹೊಸಬ.
ನನಗೆ ಸುಮಾರಾಗಿ ಬರುತ್ತದೆ.
ನಾನು ಇದರಲ್ಲಿ ಚೆನ್ನಾಗಿ ನುರಿತವನು.
 
 
 
 
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ?
ನಿನ್ನ ಬಳಿ ಸ್ಕೀಸ್ ಇದೆಯೆ?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ?
 
 
 
 


ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಜೆಕ್ for beginners