Learn Languages Online!

Home  >   50languages.com   >   ಕನ್ನಡ   >   ಜೆಕ್   >   Table of contents


೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

 


33 [třicet tři]

Na nádraží

 

 

 Click to see the text! arrow
  
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ?
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ?
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ?
 
 
 
 
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ?
 
 
 
 
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು.
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು.
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು.
 
 
 
 
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ?
 
 
 
 
ನಾನು ರೈಲುಗಳನ್ನು ಬದಲಾಯಿಸಬೇಕೆ?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ?
 
 
 
 
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು.
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು.
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ?
 
 
 
 


ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಜೆಕ್ for beginners