Learn Languages Online!
|
![]() ![]() ![]() |
Home > 50languages.com > ಕನ್ನಡ > ಸ್ಪ್ಯಾನಿಷ್ > Table of contents |
೯೯ [ತೊಂಬತ್ತೊಂಬತ್ತು] |
ಷಷ್ಠಿ ವಿಭಕ್ತಿ
|
![]() |
99 [noventa y nueve] |
||
Genitivo
|
| |||||
ನನ್ನ ಸ್ನೇಹಿತೆಯ ಬೆಕ್ಕು.
| |||||
ನನ್ನ ಸ್ನೇಹಿತನ ನಾಯಿ.
| |||||
ನನ್ನ ಮಕ್ಕಳ ಆಟಿಕೆಗಳು.
| |||||
ಅದು ನನ್ನ ಸಹೋದ್ಯೋಗಿಯ ಕೋಟು.
| |||||
ಅದು ನನ್ನ ಸಹೋದ್ಯೋಗಿಯ ಕಾರ್.
| |||||
ಅದು ನನ್ನ ಸಹೋದ್ಯೋಗಿಯ ಕೆಲಸ.
| |||||
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ.
| |||||
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ.
| |||||
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ.
| |||||
ಆ ಹುಡುಗಿಯ ಹೆತ್ತವರು ಯಾರು?
| |||||
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು?
| |||||
ಮನೆ ರಸ್ತೆಯ ಕೊನೆಯಲ್ಲಿದೆ.
| |||||
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು?
| |||||
ಆ ಪುಸ್ತಕದ ಹೆಸರೇನು?
| |||||
ಪಕ್ಕದ ಮನೆಯವರ ಮಕ್ಕಳ ಹೆಸರೇನು?
| |||||
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ?
| |||||
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು?
| |||||
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು?
| |||||
![]() ![]() ![]() |
ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ. |
Downloads are FREE for private use, public schools and for non-commercial purposes only! LICENCE AGREEMENT. Please report any mistakes or incorrect translations here. Imprint - Impressum © Copyright 2007 - 2020 Goethe Verlag Starnberg and licensors. All rights reserved. Contact book2 ಕನ್ನಡ - ಸ್ಪ್ಯಾನಿಷ್ for beginners
|