Learn Languages Online!

Home  >   50languages.com   >   ಕನ್ನಡ   >   ಸ್ಪ್ಯಾನಿಷ್   >   Table of contents


೧೧ [ಹನ್ನೊಂದು]

ತಿಂಗಳುಗಳು

 


11 [once]

Los Meses

 

 

 Click to see the text! arrow
  
ಜನವರಿ.
ಫೆಬ್ರವರಿ.
ಮಾರ್ಚ್.
 
 
 
 
ಏಪ್ರಿಲ್.
ಮೇ.
ಜೂನ್.
 
 
 
 
ಇವುಗಳು ಆರು ತಿಂಗಳುಗಳು.
ಜನವರಿ, ಫೆಬ್ರವರಿ, ಮಾರ್ಚ್
ಏಪ್ರಿಲ್, ಮೇ, ಜೂನ್.
 
 
 
 
ಜುಲೈ.
ಆಗಸ್ಟ್.
ಸೆಪ್ಟೆಂಬರ್.
 
 
 
 
ಅಕ್ಟೋಬರ್.
ನವೆಂಬರ್.
ಡಿಸೆಂಬರ್.
 
 
 
 
ಇವುಗಳು ಸಹ ಆರು ತಿಂಗಳುಗಳು.
ಜುಲೈ, ಆಗಸ್ಟ್, ಸೆಪ್ಟೆಂಬರ್.
ಅಕ್ಟೋಬರ್, ನವೆಂಬರ್, ಡಿಸೆಂಬರ್.
 
 
 
 


ಲ್ಯಾಟಿನ್, ಒಂದು ಜೀವಂತ ಭಾಷೆ?

ಇಂದಿನ ದಿನಗಳಲ್ಲಿ ಆಂಗ್ಲ ಭಾಷೆ ಅತಿ ಮುಖ್ಯ ವಿಶ್ವ ಭಾಷೆ. ಅದನ್ನು ಪ್ರಪಂಚದಾದ್ಯಂತ ಕಲಿಸಲಾಗುತ್ತದೆ ಹಾಗೂ ಹಲವಾರು ದೇಶಗಳ ಆಡಳಿತ ಭಾಷೆ. ಮುಂಚೆ ಲ್ಯಾಟಿನ್ ಈ ಸ್ಥಾನವನ್ನು ಪಡೆದಿತ್ತು. ಲ್ಯಾಟಿನ್ ಅನ್ನು ಮೂಲತಹಃ ಲ್ಯಾಟೀನರು ಮಾತನಾಡುತ್ತಿದ್ದರು. ಇವರು ಲ್ಯಾಟಿಯಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ರೋಮ್ ಕೇಂದ್ರಬಿಂದುವಾಗಿತ್ತು. ರೋಮನ್ ಸಾಮ್ರಾಜ್ಯ ಬೆಳೆಯುತ್ತ ಹೋದಂತೆ ಭಾಷೆಯು ಕೂಡ ಹರಡತೊಡಗಿತು. ಪುರಾತನ ಕಾಲದಲ್ಲಿ ಲ್ಯಾಟಿನ್ ಹಲವಾರು ಜನಾಂಗಕ್ಕೆ ಮಾತೃಭಾಷೆಯಾಗಿತ್ತು. ಈ ಜನಾಂಗಗಳು ಯುರೋಪ್, ಉತ್ತರಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ವಾಸಿಸುತ್ತಿದ್ದರು. ಮಾತನಾಡುವ ಲ್ಯಾಟಿನ್ ಭಾಷೆ ಪ್ರಬುದ್ಧ ಲ್ಯಾಟಿನ್ ಗಿಂತ ವಿಭಿನ್ನವಾಗಿತ್ತು. ಆಡುಮಾತಿನ ಲ್ಯಾಟಿನ್ ಅನ್ನು ಗ್ರಾಮ್ಯ ಲ್ಯಾಟಿನ್ ಎಂದು ಕರೆಯಲಾಗುತ್ತಿತ್ತು. ಎಲ್ಲೆಲ್ಲಿ ರೋಮನ್ ಸಾಮ್ರಾಜ್ಯ ಇತ್ತೊ ಅಲ್ಲೆಲ್ಲ ವಿವಿಧ ಆಡು ಭಾಷೆಗಳಿದ್ದವು. ಈ ಆಡು ಭಾಷೆಗಳಿಂದ ಮಧ್ಯ ಯುಗದಲ್ಲಿ ದೇಶೀಯ ಭಾಷೆಗಳು ಹುಟ್ಟಿಕೊಂಡವು. ಯಾವ ಭಾಷೆಗಳು ಲ್ಯಾಟೀನ್ ನಿಂದ ಬಂದಿವೆಯೊ ಅವುಗಳು ರೋಮಾನಿಕ್ ಭಾಷೆಗಳು. ಇಟ್ಯಾಲಿಯನ್,ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಫ್ರೆಂಚ್ ಮತ್ತು ರುಮೇನಿಯೆನ್ ಸಹ ಲ್ಯಾಟಿನ್ ಅನ್ನು ತಳಹದಿಯನ್ನಾಗಿ ಹೊಂದಿವೆ. ಲ್ಯಾಟಿನ್ ಭಾಷೆ ಸಂಪೂರ್ಣವಾಗಿ ನಶಿಸಿ ಹೋಗಲಿಲ್ಲ. ಹತ್ತೊಂಬತ್ತನೆ ಶತಮಾನದಲ್ಲಿ ಕೂಡ ಅದು ಪ್ರಮುಖ ವಾಣಿಜ್ಯ ಭಾಷೆಯಾಗಿತ್ತು. ಹಾಗೂ ವಿದ್ಯಾವಂತರ ಭಾಷೆಯಾಗಿತ್ತು. ಇಂದಿಗೂ ಸಹ ವಿಜ್ಞಾನಕ್ಕೆ ಅದು ಅತಿ ಅವಶ್ಯಕವಾಗಿದೆ. ಏಕೆಂದರೆ ಬಹುತೇಕ ಪಾರಿಭಾಷಿಕ ಪದಗಳು ಲ್ಯಾಟಿನ್ ನಿಂದ ಉಗಮವಾಗಿವೆ. ಶಾಲೆಗಳಲ್ಲಿ ಕೂಡ ಲ್ಯಾಟಿನ್ ಅನ್ನು ಪರಭಾಷೆ ಎಂದು ಕಲಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಲ್ಯಾಟಿನ್ ಜ್ಞಾನವನ್ನು ಅಪೇಕ್ಷಿಸುತ್ತಾರೆ. ಅಂದರೆ ಲ್ಯಾಟಿನ್ ಅನ್ನು ಉಪಯೋಗಿಸದೆ ಇದ್ದರೂ ಕೂಡ ಅದರ ಅವಸಾನವಾಗಿಲ್ಲ. ಹಲವು ವರ್ಷಗಳಿಂದ ಲ್ಯಾಟಿನ್ ಭಾಷೆ ಮತ್ತೊಮ್ಮೆ ಚಲಾವಣೆಗೆ ಬಂದಿದೆ. ಲ್ಯಾಟಿನ್ ಕಲಿಯುವ ಆಸಕ್ತಿ ಇರುವವರ ಸಂಖ್ಯೆ ತಿರುಗಿ ಹೆಚ್ಚಾಗುತ್ತಿದೆ. ಹಲವಾರು ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಇನ್ನೂ ಈ ಭಾಷೆಯ ಮೂಲಕವೆ ನೆರವೆರುತ್ತದೆ. ಲ್ಯಾಟಿನ್ ಕಲಿಯಲು ಧೈರ್ಯ ಮಾಡಿ! ಅದೃಷ್ಟ ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಸ್ಪ್ಯಾನಿಷ್ for beginners