Learn Languages Online!

Home  >   50languages.com   >   ಕನ್ನಡ   >   ಪರ್ಷಿಯನ್ ಭಾಷೆ   >   Table of contents


೫೩ [ಐವತ್ತ ಮೂರು]

ಅಂಗಡಿಗಳು

 


‫53 [پنجاه و سه]‬

‫مغازه ها‬

 

 
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
‫ما در جستجوی یک فروشگاه ورزشی هستیم.‬
mâ dar jost-o-juye yek forushgâhe varzeshi hastim.
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ.
‫ما در جستجوی یک قصابی هستیم.‬
mâ dar jost-o-juye yek ghas-sâbi hastim.
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
‫ما درجستجوی یک داروخانه هستیم.‬
mâ dar jost-o-juye yek dârukhâne hastim.
 
 
 
 
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು.
‫چون که ما می خواهیم توپ فوتبال بخریم.‬
chun ke mâ mikhâhim toop-pe footbâl bekharim.
ನಾವು ಸಲಾಮಿ ಕೊಂಡು ಕೊಳ್ಳಬೇಕು.
‫چون که ما می خواهیم کالباس بخریم.‬
chun ke mâ mikhâhim kâlbâs bekharim.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು.
‫چون که ما می خواهیم دارو بخریم.‬
chun ke mâ mikhâhim dâru bekharim.
 
 
 
 
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ.
‫دنبال فروشگاه ورزشی میگردیم تا توپ فوتبال بخریم.‬
donbâle forush-gâhe varzeshi migardim tâ toop-pe footbâl bekharim.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ.
‫دنبال قصابی می گردیم تا کالباس بخریم.‬
donbâle ghas-sâbi migardim tâ kâlbâs bekharim.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ.
‫دنبال داروخانه می گردیم تا دارو بخریم.‬
donbâle dârukhâne migardim tâ dâru bekharim.
 
 
 
 
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ.
‫من در جستجوی یک جواهر فروشی هستم.‬
man dar jost-o-juye yek javâher-forushi hastam.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ.
‫من در جستجوی یک مغازه عکاسی هستم.‬
man dar jost-o-juye yek maghâze-e ak-kâsi hastam.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ.
‫من در جستجوی یک قنادی هستم.‬
man dar jost-o-juye yek ghan-nâdi hastam.
 
 
 
 
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ.
‫من قصد دارم یک حلقه بخرم.‬
man ghasd dâram yek halghe bekharam.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ.
‫من قصد دارم یک حلقه فیلم بخرم.‬
man ghasd dâram yek halghe film bekharam.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ.
‫من قصد دارم یک کیک بخرم.‬
man ghasd dâram yek keyk bekharam.
 
 
 
 
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ.
‫من در جستجوی یک جواهر فروشی هستم تا یک حلقه بخرم.‬
man dar jost-o-juye yek javâher-forushi hastam tâ yek halghe bekharam.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ.
‫من در جستجوی یک عکاسی هستم تا یک حلقه فیلم بخرم.‬
man dar jost-o-juye yek ak-kâsi hastam tâ yek halghe film bekharam.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ.
‫من در جستجوی یک قنادی هستم تا یک کیک بخرم.‬
man dar jost-o-juye yek ghan-nâdi hastam tâ yek keyk bekharam.
 
 
 
 
 


ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 ಕನ್ನಡ - ಪರ್ಷಿಯನ್ ಭಾಷೆ for beginners